ಇತ್ತೀಚೆಗೆ ಬಂದ ಕನ್ನಡದ ಎರಡು ಅದ್ಭುತ ಚಿತ್ರಗಳು “ಜಾನಿ ಮೇರಾ ನಾಮ್” ಮತ್ತು “ಯೋಗರಾಜ್ ..but”.
ಪ್ರೀತಂ ನಿರ್ದೇಶನದ ಪಕ್ಕ commercial ಚಿತ್ರ ಜಾನಿ.. ಎಲ್ಲ ವರ್ಗದ ವೀಕ್ಷಕರನ್ನು ಹಿಡಿದು ಇಡಲಿಕ್ಕೆ ಬೇಕಾದ ಎಲ್ಲ factorಗಳನ್ನೂ ಅತಿ ಸೊಗಸಾದ ನಿರೂಪಣೆಯಲ್ಲಿ ಒಂದು ಚಿತ್ರದ ಚೌಕಟ್ಟಿನಲ್ಲಿ ತುಂಬಿ ಇಟ್ಟಿರೋದು ಅದ್ಭುತ. ಕಥೆ ಅತೀ ಸಾಮಾನ್ಯ ಆದರು ಸಹ ನಿರೂಪಣೆ ಹೊಸತನದಿಂದ ತುಂಬಿದೆ.. ಹರಿಕೃಷ್ಣರ ಸಂಗೀತಕ್ಕೆ ಭಟ್ಟರು ಮತ್ತೆ ಕಾಯ್ಕಿಣಿಯವರ ಪದಗಳು ಹೊಂದಿಕೊಂಡು, ಅದಕ್ಕೆ ಪ್ರೀತಂ ಅವರ ಸೃಜನಾತ್ಮಕತೆ ಸೇರಿ ಮೂಡಿಬಂದಿರುವ ಹಾಡುಗಳನ್ನು ತೆರೆಯ ಮೇಲೆ ನೋಡುವುದೇ ಒಂದು ಅದ್ಭುತ ಅನುಭವ. ಮೊದಲ ಬಾರಿಗೆ ರಮ್ಯಳ ಅಭಿನಯ ಅತ್ಯಂತ ನೈಜವಾಗಿ ಕಾಣತ್ತೆ. ಆದರೆ ಕಡೆಗೆ its ವಿಜಿ who steals the show. Mannerism, dialogue, acting ಎಲ್ಲ ನಿಟ್ಟಿನಲ್ಲೂ ಬಹಳ matured ಆಗಿರೋ ಕಲಾವಿದ ವಿಜಿ. ಬಹಳ ಸಾಮಾನ್ಯ ಸರಳವಾಗಿರುವ ಕಥೇನ ಒಂದು ಸುಂದರ ಕಲಾಕೃತಿಯಾಗಿ ಮಾಡಿ ತಮ್ಮ caliberನ prove ಮಾಡಿರೋ ಪ್ರೀತಂ, ಇನ್ನು ಸೀರಿಯಸ್ noteನಲ್ಲಿ, ಮುಂದಿನ ಹಂತದ ಸಿನಿಮ ಮಾಡೋದಕ್ಕೆ ಮುಂದಾಗಬೇಕು.. ಅದು ನಮ್ಮ ಇಂದಿನ ಚಂದನವನ(sandalwood as called by hamsalekha)ದ ಅನಿವಾರ್ಯ. ಕನ್ನಡೇತರರಾಗಿ ಹೋಗ್ತಿರೋ crowdನ pull ಮಾಡೋ ಅವಶ್ಯಕತೆ ಇದೆ.. Overall, ಜಾನಿ ಒಳ್ಳೆ ಸಿನಿಮ. ಇದನ್ನ ಹೇಳೋ ಅವಶ್ಯಕತೆನೆ ಇಲ್ಲದೇ.. It has proved itself.