Browsing Category : Creative writing

ದೀಪ


ಹಚ್ಚುವ ಪ್ರತಿ ದೀಪವು ಬೆಳಗಲಿ ಬದುಕನ್ನು ಬೆಳಕಿನ ಪ್ರತಿ ಕಣವು ಹೊಡೆದೋಡಿಸಲಿ ಅಂಧಕಾರವನ್ನು ಜ್ಯೋತಿಯ ಪ್ರಖರತೆ ಮೂಡಿಸಲಿ ಒಳಿತಿನ ನಂಬುಗೆಯನ್ನು ಕುಡಿಯ ನಿಶ್ಚಲತೆ ತುಂಬಲಿ ದೃಡ ಆತ್ಮವಿಶ್ವಾಸವನ್ನು ಆರತಿಯ ಸಂಭ್ರಮವು ಹರಡಲಿ ಪ್ರೀತಿ ವಿಶ್ವಾಸವನ್ನು ನಂದಾದೀಪವು ಶಾಶ್ವತಗೊಳಿಸಲಿ ಬದುಕಿನ ಭವ್ಯತೆಯನ್ನು

ನಿರೀಕ್ಷೆ


ಈ ಸಣ್ಣ ಘಳಿಗೇಲಿ ನಾ ಕಂಡ ಕನಸಲ್ಲಿ ಅರಳಿದ್ದು ನಿನ್ನಾನಗೆಯೇ ಈ ಸಿಹಿ ಗುಟ್ಟನ್ನು  ನನ್ನ ಪಿಸುಮಾತು ನಿನಗೆಂದೇ ತಂದಿದೆ ಹಿಂದೆಲ್ಲ ಸಂಜೆ ನೀ ಬರುವ ಮುಂಚೆ ಕಾದಿದ್ದು ನಿನಗಾಗಿಯೇ ನಿನ್ನ ಮೈ ಸೋಕಿ ಬರುವ ತಂಗಾಳಿ ಹೇಳಿದ್ದು ಈ ಮಾತನೆ ತಪ್ಪು ಮಾಡಿದ್ದು ಈ ನನ್ನ ಕಣ್ಣು ಎದುರಿದ್ದ ನಿನ್ನ ನೋಡದೆ ಮತ್ತೊಂದು ತಪ್ಪು ಮಾಡಿದೆ ಆ ಕಣ್ಣು  ಎಲ್ಲೆಲ್ಲು ನಿನ್ನ ಹುಡುಕಿದೆ ನೀ ಬರುವ ಮುಂಚೆ ಈ ತಂಪು ತಂಗಾಳಿ ಯಾಕಿಷ್ಟು ಬೀಸಿದೆ ಎಷ್ಟೊಂದು ಒಲವು ಹುಚ್ಚು  ಈ ಹೃದಯ ನಿಂತು…

ಒಲವಿನ ಹಾಡು


ಭಟ್ಟರ ಇನ್ನೊಂದು ಅದ್ಭುತ ಸಾಹಿತ್ಯ.. ನನ್ನ ಬ್ಲಾಗ್ನಲ್ಲಿ  ಇದು ಮೊದಲು.. ನನಗೆ ಮೆಚ್ಚಿದ್ದು, ಆತ್ಮೀಯವೆನಿಸಿದ್ದನ್ನು ಹಂಚಿಕೊಳ್ಳುವ ಹೊಸ ಹುಚ್ಚಿನ ಒಂದು ಮಜಲು.. ಇದು ಮುಂದುವರಿಯಲಿದೆ.. ನಿರಂತರವಾಗಿ.. ಒಪ್ಪಿಸಿಕೊಳ್ಳಿ..ಚಿತ್ರ :                  ಜಾಕಿ ಸಾಹಿತ್ಯ :              ಯೋಗರಾಜ್ ಭಟ್ ಸಂಗೀತ :             ಹರಿಕೃಷ್ಣಗಾಯಕರು:        ಸೋನು ನಿಗಮ್, ಶ್ರೇಯ ಘೋಶಾಲ್ನಿರ್ದೇಶನ :         ಸೂರಿಎರಡು ಜಡೆಯನ್ನು  ಎಳೆದು ಕೇಳುವೆನು ನೀ ಸ್ವಲ್ಪ ನಿಲ್ಲಬಾರದೆಎರಡು ನೆರಳೇಕೆ ನಾವಿಬ್ಬರು ಒಂದೇ ಬಳಿ ನೀನು ಬರಬಾರದೇನೀ ದೂರ ನಿಂತಾಗ ಬಾ ಎಂದು ನಾ ನಿನ್ನ ಕೂಗೋದು ಚಟವಲ್ಲವೇಇಷ್ಟೊಂದು ಒಲವಲ್ಲಿ ನಿನ್ನ ನೀಳ…

ಸಾರ್ಥಕತೆ


ಕವನದ ಹಂಗೇಕೆ ನನಗೆ ಬರೆವ ಪ್ರತಿ ಪದವು ನಿನ್ನ ಸೇರುತಿರಲು.. ಹಾಳೆ ತುಂಬವ ಗೋಜೇಕೆ ಎನಗೆ ಎರಡಕ್ಷರದಲ್ಲೇ ಭಾವವೆಲ್ಲ ಬಸಿದಿರಲು.. ಹಾಡು ಹಾಡುವ ತವಕವೇಕೆ ಈಗ ನಿನ್ನುಸಿರೆ ನನ್ನೆದೆಯಲ್ಲಿ ರಾಗವಾಗಿರಲು.. ವಿರಹದ ನೋವೇಕೆ ನೆನಪಿಗೆ ಮನದಲ್ಲಿ ಅನುರಾಗವೇ ತುಂಬಿರಲು..

ನಿನಗಾಗಿ


ನಿನ್ನ ನೋಡುವ ಕಾತರತೆಯೊಂದಿಗೆ ಹೊರಟಿರುವೆ ನಾನು.. ಬೇಗ ಮುಗಿಸಿಕೊ ನಿನ್ನ ನಿತ್ಯದ ಜಂಜಡಗಳನ್ನು ಮೋಡದೊಡಲೊಳಗಿನ ಹನಿಗಳನೆಲ್ಲ ಹಿಂದಿಕ್ಕಿ ಬರುತಿದೆ ಬಿಂದುವೊಂದು ಭೂಮಿ ಕೂಡ ಸಜ್ಜಾಗಿದೆ ಸಿಂಧುವಾಗಲೆಂದು..

ಅಸ್ಪಷ್ಟ


ಸುಳಿವೇ ಇಲ್ಲದೆ ಕಾಡುವ ಮರೆತ ರಾಗದಂತೆ.. ಮೋಡವೇ ಇಲ್ಲದೆ ಸುರಿವ ಮಳೆಯ ಹನಿಯಂತೆ.. ದಾಟಿದಷ್ಟು ಬೆಳೆವ ಕಡಲ ಹರವಿನಂತೆ… ಮರೆಮಾಡಿದಷ್ಟು ಇಣುಕುವ ಮೊದಲ ಪ್ರೇಮಿಯ ಕುಡಿನೋಟದಂತೆ.. ಭಾವದ ಭಾರ.

Instagram
LinkedIn
LinkedIn
Share
RSS