ಹಳೆ ನೆನಪುಗಳನ್ನೆಲ್ಲ ಅಳಿಸಿ ಹೊಸ ಮನ್ವಂತರಕ್ಕೆ ಕಾಲಿಡಬೇಕು. ಅಲ್ಲಿ ಬರಿ ಕನಸು, ಭರವಸೆ ..
ನೋವಾಗಿ ಕಾಡುವ ನೆನಪನ್ನೆಲ್ಲ ಮತ್ತೆ ಬರಲಾರದಷ್ಟು ದೂರ ಬಿಸುಟು ಬರಿದಾಗಬೇಕು …
ಅದರ ಹಂಗು ಮಾತ್ರವಲ್ಲ ಕಿಂಚಿತ್ತು ಪ್ರಭಾವವನ್ನು ಇಲ್ಲವಾಗಿಸಿಕೊಳ್ಳಬೇಕು ಅನ್ನುವ ತಪನೆ ..
ಎಲ್ಲ ಬಿಟ್ಟು ನಾನು ಬರಿ ನಾನಾಗಿ ನಿನ್ನ ಮಡಿಲಿಗೆ ಬಂದು ಬೀಳುತ್ತಲಿದ್ದೇನೆ..
ಹರಸಿ ಮಡಿಲು ತುಂಬಿಕೊ, ಎತ್ತಿ ಎದೆಗೆ ಅಪ್ಪಿಕೋ ..
ಮತ್ತೆ ಆ ನೋವಿನ ಹಳೆ ಹಂದರಕ್ಕೆ ಬೀಳದ ಹಾಗೆ ಗಟ್ಟಿಮಾಡಿಕೋ
ಹೊಸ ಹಾಡೊಂದನ್ನ ಹಾಡೋಣ
ಹೊಸ ಬಾಳೊಂದನ್ನ ಕಟ್ಟೋಣ
ಅದರ ತುಂಬಾ ಹೊಸ ಕನಸು.. ಅಲ್ಲಿ ಮಾತ್ರ ನಾನು ನೀನು ..
ಇಗೋ ಬೆತ್ತಲಾಗಿ ಮಗುವಾಗಿ ಬಂದೀನಿ.. ನಿನಗಾಗಿ ಬಂದೀನಿ.. ಕೇವಲ ನಿನ್ನದಾಗಲಿಕ್ಕೆ ಬಂದೀನಿ
ಸ್ವೀಕರಿಸು.. ಆಲಿಂಗಿಸು.. ಆವರಿಸು…
Awesome!! very nicely expressed.