ಕನ್ನಡ ಸಿನಿಮ – july 2011

ಇತ್ತೀಚೆಗೆ ಬಂದ ಕನ್ನಡದ ಎರಡು ಅದ್ಭುತ ಚಿತ್ರಗಳು “ಜಾನಿ ಮೇರಾ ನಾಮ್” ಮತ್ತು “ಯೋಗರಾಜ್ ..but”.

Johny_mera_naam

courtesy: wikipedia

ಪ್ರೀತಂ ನಿರ್ದೇಶನದ ಪಕ್ಕ commercial ಚಿತ್ರ ಜಾನಿ.. ಎಲ್ಲ ವರ್ಗದ ವೀಕ್ಷಕರನ್ನು ಹಿಡಿದು ಇಡಲಿಕ್ಕೆ ಬೇಕಾದ ಎಲ್ಲ factorಗಳನ್ನೂ  ಅತಿ ಸೊಗಸಾದ ನಿರೂಪಣೆಯಲ್ಲಿ ಒಂದು ಚಿತ್ರದ ಚೌಕಟ್ಟಿನಲ್ಲಿ ತುಂಬಿ ಇಟ್ಟಿರೋದು ಅದ್ಭುತ. ಕಥೆ ಅತೀ ಸಾಮಾನ್ಯ ಆದರು ಸಹ ನಿರೂಪಣೆ  ಹೊಸತನದಿಂದ ತುಂಬಿದೆ.. ಹರಿಕೃಷ್ಣರ ಸಂಗೀತಕ್ಕೆ ಭಟ್ಟರು ಮತ್ತೆ ಕಾಯ್ಕಿಣಿಯವರ ಪದಗಳು ಹೊಂದಿಕೊಂಡು, ಅದಕ್ಕೆ  ಪ್ರೀತಂ ಅವರ ಸೃಜನಾತ್ಮಕತೆ ಸೇರಿ ಮೂಡಿಬಂದಿರುವ ಹಾಡುಗಳನ್ನು ತೆರೆಯ ಮೇಲೆ ನೋಡುವುದೇ ಒಂದು ಅದ್ಭುತ ಅನುಭವ. ಮೊದಲ ಬಾರಿಗೆ ರಮ್ಯಳ ಅಭಿನಯ ಅತ್ಯಂತ ನೈಜವಾಗಿ ಕಾಣತ್ತೆ. ಆದರೆ ಕಡೆಗೆ  its ವಿಜಿ who steals the show. Mannerism, dialogue, acting ಎಲ್ಲ ನಿಟ್ಟಿನಲ್ಲೂ  ಬಹಳ matured ಆಗಿರೋ ಕಲಾವಿದ ವಿಜಿ. ಬಹಳ ಸಾಮಾನ್ಯ ಸರಳವಾಗಿರುವ ಕಥೇನ ಒಂದು ಸುಂದರ  ಕಲಾಕೃತಿಯಾಗಿ ಮಾಡಿ ತಮ್ಮ caliberನ prove ಮಾಡಿರೋ ಪ್ರೀತಂ, ಇನ್ನು ಸೀರಿಯಸ್ noteನಲ್ಲಿ, ಮುಂದಿನ ಹಂತದ ಸಿನಿಮ ಮಾಡೋದಕ್ಕೆ ಮುಂದಾಗಬೇಕು.. ಅದು ನಮ್ಮ ಇಂದಿನ ಚಂದನವನ(sandalwood as called by hamsalekha)ದ  ಅನಿವಾರ್ಯ. ಕನ್ನಡೇತರರಾಗಿ ಹೋಗ್ತಿರೋ crowdನ pull ಮಾಡೋ ಅವಶ್ಯಕತೆ ಇದೆ.. Overall, ಜಾನಿ  ಒಳ್ಳೆ  ಸಿನಿಮ. ಇದನ್ನ ಹೇಳೋ ಅವಶ್ಯಕತೆನೆ ಇಲ್ಲದೇ.. It has proved itself.

Yogaraj.. But

courtesy: indiaglitz

ಇನ್ನು  ಯೋಗರಾಜ್  but.. ಕಥೆ, ನಿರೂಪಣೆ, casting, dialogues ಎಲ್ಲಾವ್ದ್ರಲ್ಲು  ಈ ಸಿನಿಮ ಒಂದು experiment. As usual ನವೀನಕೃಷ್ಣ excels. ನೀತುಗೆ ಹಾವ ಭಾವ ನಟನೆ ನೀರು ಕುಡಿದಷ್ಟೇ ಸ್ವಾಭಾವಿಕ ಅನ್ನೋದನ್ನ ಈ ಸಿನಿಮ ಮೂಲಕ  ದೃಡಪಡಿಸಿದ್ದಾರೆ .. She is an excellent performer. ಒಂದು ದಿನದಲ್ಲಿ ಇಬ್ಬರ ಜೀವನದಲ್ಲಿ ನಡೆಯೋ ಸಂಘಟನೆಗಳನ್ನ ಒಂದು ಕತೆಯಾಗಿ ಮಾಡಿ ಅದಕ್ಕೆ  ಮತ್ತೇನೋ ವಿಶೇಷತೆಯನ್ನ ತುಂಬಿ, “ಯೋಗರಾಜ್ ..but” ಅನ್ನೋ ಹೆಸರಿಟ್ಟು , ನೋಡುಗರಲ್ಲೆಲ್ಲ  ಕೆಲವು  ಪ್ರಶ್ನೆಗಳನ್ನು  ಉಳಿಸಿ ಹೋಗುತ್ತಾರೆ ನವೀನಕೃಷ್ಣ ಮತ್ತು ದಯಾಳ್, ಮೊದಲಿಂದ ಒಂದು  ಕುತೂಹಲವನ್ನು  ಉಳಿಸುವ ತರುಣ್ ಪಾತ್ರ, ಮಧ್ಯ ಬಂದು ಮಗನಿಗಿಂತ ತಾನೇ ಅದ್ಭುತ ಎಂದು ನೆನಪಿಸೋ ಶ್ರೀನಿವಾಸಮೂರ್ತಿ, ಹೀಗೆ ಬಂದು ಹಾಗೆ ಮಾಯಾ ಅಗೋ, ಆದರೆ  ಬಹಳ ಕಾಲ ಮನಸನ್ನು ಕಾಡೋ ಪಾತ್ರದಲ್ಲಿ ಸುಚೇಂದ್ರ ಪ್ರಸಾದ್, ಇವರ ಮಧ್ಯ ನಡೆಯುವ ಸಂಭಾಷಣೆ.. ಇದು ಚಿತ್ರದ highlight.. ಸುಚೆಂದ್ರಪ್ರಸಾದ್ ಅವರ ಸುತ್ತೂ ಮೂಡಿಬರುವ ಸಂಭಾಷಣೆಯಲ್ಲಿ  ನವೀನ ಅವರ ನಿಜವಾದ ಕಲೆ ಕಾಣತ್ತೆ. ಇಂತ ಕಲಾವಿದ ನಮ್ಮ ಚಂದನವನದಲ್ಲಿ ಅರಳಿರೋದು ನಮ್ಮ ಹೆಮ್ಮೆ . ಧಿಮಾಕು ಅಲ್ಲಿ ತನ್ನ ಅದ್ಭುತ ಅಭಿನಯ, bodylanguage, dialogue delivary ಹಾಗು ಹಾಡುಗಾರಿಕೆಯನ್ನು  ಮೆರೆದಿದ್ದ ನವೀನ ಇಲ್ಲಿ ತಮ್ಮಲ್ಲಿನ ಬರಹಗಾರನನ್ನು ಪರಿಚಯಗೊಳಿಸುತ್ತಾರೆ.. ಕಥೆ, ಸಂಭಾಷಣೆ ಏನೇ ಇರಬಹುದು, ಅವರಲ್ಲಿನ ಪ್ರೌಡಿಮೆಯನ್ನು  ಎತ್ತಿ ಹಿಡಿಯುತ್ತೆ.. ವಿಶೇಷವಾಗಿ ದೇವರು ಮತ್ತು ಯಮರಾಯನ ನಡುವೆ ನಡೆಯುವ ಮಾತುಕತೆ.. ಈ ಚಿತ್ರದ ಮತ್ತೊಂದು ಮುಖ್ಯ ಅಂಶವೆಂದರೆ, ಚಿತ್ರ ಮುಗಿದ ಮೇಲೂ ಅದು ನಮ್ಮನ್ನು ತಾಕುವ ಅಂಶಗಳು ಮತ್ತೆ  ಮತ್ತೆ ನಮ್ಮನ್ನು ಕಾಡ್ತವೆ. ಇಂತ ಹಲವು ಕಾರಣಗಳಿಗೆ ನೋಡಲೇಬೇಕಾದ ಚಿತ್ರ ಯೋಗರಾಜ್. ಆದರೆ asusual ಒಳ್ಳೆ ಚಿತ್ರ ತುಂಬಾ ಜನರನ್ನು reach ಆಗಲ್ಲ.. ಅದು ಚಂದನವನದ ವಿಪರ್ಯಾಸ..
ನವೀನ ತಮ್ಮ appearance ಬಗ್ಗೆ ಇನ್ನಷ್ಟು  concentrate ಮಾಡಿದ್ದಿದ್ರೆ ಮತ್ತು ಹಾಡುಗಳು ಸಿನಿಮಾದ standardsಗೆ ಇನ್ನಷ್ಟು  ಹತ್ತಿರವಾಗಿದ್ರೆ ಯೋಗರಾಜ್ ಇನ್ನಷ್ಟು  ಅದ್ಭುತವಾಗಿ ಮೂಡುತ್ತಿತ್ತು. ನವೀನ್ ಅವರಿಂದ ಹೀಗೆ ಇನ್ನಷ್ಟು ಹೊಸ ಹೊಸ ವಿನೂತನ ಶೈಲಿಯ ಚಿತ್ರಗಳು ಮೂಡಿ ಬರಲಿ ಎಂದು ಆಶಿಸುತ್ತ ಈ note ಮುಗಿಸ್ತೀನಿ. cheers.

No Comments

Leave a Comment

This site uses Akismet to reduce spam. Learn how your comment data is processed.

Instagram
LinkedIn
LinkedIn
Share
RSS