ಭಟ್ಟರ ಇನ್ನೊಂದು ಅದ್ಭುತ ಸಾಹಿತ್ಯ..
ನನ್ನ ಬ್ಲಾಗ್ನಲ್ಲಿ ಇದು ಮೊದಲು.. ನನಗೆ ಮೆಚ್ಚಿದ್ದು, ಆತ್ಮೀಯವೆನಿಸಿದ್ದನ್ನು ಹಂಚಿಕೊಳ್ಳುವ ಹೊಸ ಹುಚ್ಚಿನ ಒಂದು ಮಜಲು.. ಇದು ಮುಂದುವರಿಯಲಿದೆ.. ನಿರಂತರವಾಗಿ.. ಒಪ್ಪಿಸಿಕೊಳ್ಳಿ..
ಚಿತ್ರ : ಜಾಕಿ
ಸಾಹಿತ್ಯ : ಯೋಗರಾಜ್ ಭಟ್
ಸಂಗೀತ : ಹರಿಕೃಷ್ಣ
ಗಾಯಕರು: ಸೋನು ನಿಗಮ್, ಶ್ರೇಯ ಘೋಶಾಲ್
ನಿರ್ದೇಶನ : ಸೂರಿ
ಎರಡು ಜಡೆಯನ್ನು ಎಳೆದು ಕೇಳುವೆನು ನೀ ಸ್ವಲ್ಪ ನಿಲ್ಲಬಾರದೆ
ಎರಡು ನೆರಳೇಕೆ ನಾವಿಬ್ಬರು ಒಂದೇ ಬಳಿ ನೀನು ಬರಬಾರದೇ
ನೀ ದೂರ ನಿಂತಾಗ ಬಾ ಎಂದು ನಾ ನಿನ್ನ ಕೂಗೋದು ಚಟವಲ್ಲವೇ
ಇಷ್ಟೊಂದು ಒಲವಲ್ಲಿ ನಿನ್ನ ನೀಳ ತೋಳನ್ನು ಬಯಸೋದೆ ಹಿತವಲ್ಲವೆ
ಎರಡು ಕಂಗಳಿಗೆ ಮುತ್ತು ನೀಡುವೆನು ನೀ ಇಲ್ಲಿ ಬರಬಾರದೇ
ಎಲ್ಲ ಕನಸನ್ನು ಒಂದೇ ನೆರಳಲ್ಲಿ ಸಾಲಾಗಿ ಇಡಬಾರದೆ
ಬಾಯಾರಿ ನಾ ನಿಂತ ಘಳಿಗೇಲಿ ಮಳೆಯೊಂದು ತಾನಾಗೆ ಬರಬಾರದೇ
ಹಾಯಾದ ಸಂಜೆಯಲಿ ಹುಸಿ ಮುನಿಸು ಬಂದಾಗ ನೀನೊಮ್ಮೆ ಸಿಗಬಾರದೇ
ನೀನಿಲ್ಲದಾಗ ನಾ ಕಂಡ ಕನಸು ಅತಿಯಾಗಿ ನೆನಪಾಗಿದೆ
ಬಿಡದೆ ಕಂಗಳಿಗೆ ಮುತ್ತು ನೀಡುವೆನು ನೀ ಇಲ್ಲಿ ಬರಬಾರದೇ
ಎಲ್ಲ ಕನಸನ್ನು ಒಂದೇ ನೆರಳಲ್ಲಿ ಸಾಲಾಗಿ ಇಡಬಾರದೆ
ನಾ ತುಂಬಾ ನಗುವಾಗ ಈ ಕೆನ್ನೆ ಮೇಲೊಂದು ಚುಕ್ಕಿಯ ಇಡಬಾರದೆ
ಖುಷಿಯಲ್ಲಿ ನಿನ್ನನ್ನು ಮಗುವಂತೆ ಬಿಗಿದಪ್ಪಿ ನಾ ಬಿಕ್ಕಿ ಅಳಬಾರದೆ
ನಿನ್ನಿಂದ ಕನಸು ನಿನ್ನಿಂದಲೇ ಮುನಿಸು ಕಲಿಯೋದು ಮಜವಾಗಿದೆ ..
ಇದೇ tuneಗೆ ನನ್ನದೇ ಪದಗಳನ್ನು ಜೋಡಿಸುವ ಪ್ರಯತ್ನ ಕೊಟ್ಟ ಫಲ —
ಈ ಸಣ್ಣ ಘಳಿಗೇಲಿ ನಾ ಕಂಡ ಕನಸಲ್ಲಿ ಅರಳಿದ್ದು ನಿನ್ನಾನಗೆಯೇ
ಈ ಸಿಹಿ ಗುಟ್ಟನ್ನು ನನ್ನ ಪಿಸುಮಾತು ನಿನಗೆಂದೇ ತಂದಿದೆ
ಹಿಂದೆಲ್ಲ ಸಂಜೆ ನೀ ಬರುವ ಮುಂಚೆ ಕಾದಿದ್ದು ನಿನಗಾಗಿಯೇ
ನಿನ್ನ ಮೈ ಸೋಕಿ ಬರುವ ತಂಗಾಳಿ ಹೇಳಿದ್ದು ಈ ಮಾತನೆ
ತಪ್ಪು ಮಾಡಿದ್ದು ಈ ನನ್ನ ಕಣ್ಣು ಎದುರಿದ್ದ ನಿನ್ನ ನೋಡದೆ
ಮತ್ತೊಂದು ತಪ್ಪು ಮಾಡಿದೆ ಆ ಕಣ್ಣು ಎಲ್ಲೆಲ್ಲು ನಿನ್ನ ಹುಡುಕಿದೆ
ನೀ ಬರುವ ಮುಂಚೆ ಈ ತಂಪು ತಂಗಾಳಿ ಯಾಕಿಷ್ಟು ಬೀಸಿದೆ
ಎಷ್ಟೊಂದು ಒಲವು ಹುಚ್ಚು ಈ ಹೃದಯ ನಿಂತು ನಿನ್ನ ಕಾದಿದೆ
ಮಳೆಯ ಹನಿಯೊಂದು ತಾನೇ ಮೊದಲೆಂದು ನನ್ನ ಬಳಿ ಬಂದಿದೆ
ಬೆಂದ ಈ ಒಡಲು ನೀನೆ ಬೇಕೆಂದು ಸರಿ ದೂರ ಸರಿದಿದೆ
ಯಾಕಿಷ್ಟು ಹೊತ್ತು ಬೇರೇನೂ ಬೇಡ ನೀನಿಲ್ಲಿ ಬರಬೇಕಿದೆ
ಬಿಗಿದಪ್ಪಿ ನಿನ್ನ ಮರಳದ ಹಾಗೆ ನನ್ನಲೇ ಹಿಡಿದಿದಬೇಕಿದೆ
Nice lyrics …. heard it for the first time !
Thanks Suhas !