Browsing Category : ಹನಿ.. ಇಬ್ಬನಿ..

ವಿರಹ


ಎಲ್ಲಿರುವೆ ಎನ್ನ ಮನದನ್ನೆಸಾಕಿನ್ನು ಹುಡುಗಾಟಬಂದುಬಿಡು ಕಣ್ಮುಂದೆ. ಕನಸು ಕಣ್ಣಿಣಲ್ಲಿ ಉಳಿಯಲಾರದೆನಿದ್ದೆಯನ್ನು ಸರಿ ದೂರ ಓಡಿಸಿದೆಬೆಳದಿಂಗಳು ನೋಡಿ ನಗುತಿದೆ ಕವಿತೆಯು ತಾನೆ ಜ್ವರವಾಗಿದೆಕವಿ ಮನಸು ಜಡವಾಗಿದೆನೀನಿಲ್ಲದೆ ಭಾವಗೀತೆಯು ಭಾರವಾಗಿದೆ ನನ್ನ ಮನವು ನನ್ನೆ ಕೆಣಕುತಿದೆಕವನ ಮುನಿಸಿಕೊಂಡಿದೆವಿರಹದ ತಾಪವೇರುತಿದೆ ಇನ್ನು ಸಹಿಸಲಾರೆ ದೂರಬಂದೆನ್ನ ಬಂಧಿಸುನಿನ್ನ ಬಿಸಿಯಪ್ಪುಗೆಯಲ್ಲಿ ಮೋಡಮುಸುಕಿದ ಮನದಲ್ಲಿಭಾವ ಸುರಿವಮಳೆಯಾಗಲಿಕವನ ಮೊಳೆತು ಒಲವು ಅರಳಲಿ

ಅಗಲಿಕೆ


ಪ್ರೇಮದ ಸಾಕ್ಷಾತ್ಕಾರದ ಸಾಕ್ಷಿಗೆಎಷ್ಟೋ ಮಧುರ ನೆನಪುಗಳನ್ನುಜೀವಂತವಾಗಿ ಉಳಿಸಿರುವ ನಿನ್ನ ಪ್ರೀತಿಗೆಗ್ರಹಣದಂತೆ ಕಾಡುವ ಈ ಅಗಲಿಕೆಯಮೋಡದ ತೆರೆಯೇಕೆ?ನಿನ್ನ ಕುಡಿನೋಟದ ನಿರೀಕ್ಷೆಯಲ್ಲಿಕ್ಷಣಗಳನ್ನು ದಿನಗಳಂತೆ ಕಳೆಯುತ್ತಿರುವಾಗಹೃದಯದ ತಳಮಳ ಈಗಷ್ಟೇ ತಿಳಿದಂತೆಥಟ್ಟನೆ ತಿರುಗಿ ನೋಡಿ ಹೂನಗೆಯನ್ನುಬೀರಿದ ಆ ಕ್ಷಣದ ಮಧುರತೆಯ ನೆನಪುಮನದಲ್ಲಿ ಮೂಡುತ್ತಿರುವಾಗಲೇನಿನ್ನ ಅಗಲಿಕೆಯ ಸತ್ಯ ಒಡಲೊಳಗಿನಿಂದ ಹುಟ್ಟಿ ಕಣ್ಣೀರಾಗಿ ಹರಿಯುವುದೇಕೆ? ಸಿಹಿ ನೆನಪು ಹೋಗಲಿ, ನಿನ್ನ ಕುರಿತಾದನೋವಾದರೂ ನನ್ನೂಳಗಿರಬಾರದೇಶಾಶ್ವತವಾಗಿ??

ಹನಿ


ಎಲ್ಲೋ ಯಾವಾಗಲೋ ಶುಭ್ರ ಆಕಾಶದಲ್ಲಿ ಮೋಡದ ಮಧ್ಯದಿಂದ ಜಾರೋ ಒಂದು ಹನಿ, ಪ್ರೇಮಿಯ ಆಗಮನದ ನಿರೀಕ್ಷೆಯಲ್ಲಿ ಇರೋ ಪ್ರಿಯಕರನ ಹಣೆ ಮೇಲೆ ಬೀಳೋ ಹಾಗೆ ಅಪರೂಪಕ್ಕಾದ್ರು ಒಮ್ಮೆ ನನ್ನ ಕಡೆ ನೋಡು.. ಯಾಕಂದ್ರೆ ಸುರಿದು ನಿಂತು ಹೋಗು ಮುಂಗಾರುಮಳೆಗಿಂತ ಈ ಹನೀನೆ ತುಂಬಾ ಮುದ ನೀಡೋದು..

ಒಂದು ರಚ್ಚೆ ಹಿಡಿದ ಮಳೆಯ ರಾತ್ರಿ..


ಇವತ್ತು ಜೋರು ಮಳೆ.. ಗುಡುಗು ಸಿಡಿಲು… ಎಲ್ಲಾ ತುಂಬಾ ಆರ್ಭಟ… ನಿನ್ನ ನೆನಪಿನಂತೆ.. ತುಂಬಾ ತೀವ್ರ.. ಮೋಡದ ಜೊತೆ ಸ್ಪರ್ಧೆಗೆ ಇಳಿದಂತೆ ನನ್ನ ಕಣ್ಣು ಮಳೆಗಿಂತ ರಭಸವಾಗಿ ಸುರಿಸ್ತಿದೆ ಕಣ್ಣೀರು.. ಒಂಟಿಯಾಗಿದ್ದಾಗ, ಅದೂ ಕತ್ತಲಲ್ಲಿ ಯಾಕೆ ನನ್ನ ಹೀಗೆ ಕಾಡ್ತ್ಯ ನೀನು? ನಿನ್ನ ಮರೆಯೋ ಪ್ರತಿ ಪ್ರಯತ್ನನು ಹೊಸ ಸ್ಮೃತಿಯನ್ನು ನೆನಪು ಮಾಡಿಕೊಟ್ಟ ಹಾಗೆ.. ಪ್ರತಿ ಕಣ್ಣೀರ ಹನೀನು ನಿನ್ನ ಇನ್ನೂ ಎದೆಯಾಳಕ್ಕೆ ನೂಕೋ ಹಾಗೆ.. ಯಾಕೆ ಹೀಗೆಲ್ಲ.. ಅಷ್ಟು ಬೆರೆತೋಗಿದ್ಯ ನನ್ನೊಳಗೆ? ಅಗಲಿ ಎಷ್ಟು ವರ್ಷ ಆಯಿತು ನೀನು.. ಆದರೂ ಯಾಕೆ ನೆನ್ನೆಯಷ್ಟೇ ಜೊತೆಗಿದ್ದ ಹಾಗೆ,…

ಮೊದಲ ಕವನ "ಕೋರಿಕೆ"


ಬದುಕು ಬೇಸರವಾಗಿ ನೆನಪು ನೀರಸವಾಗಿಕನಸು ಕಣ್ಣಿನಿಂದ ಮರೆಯಾಗಿನೋವೇ ಜೀವನದ ಒಡನಾಡಿಯಾಗಿರಲುನೀ ಬಂದೆ ಸ್ಪೂರ್ತಿಯ ಸೆಲೆಯಾಗಿಬೇಸರವ ಕಳೆದು ನೀರಸವ ನೀಗಿಸಿತೆರೆದ ಕಣ್ಣೊಳಗೆ ಕನಸಾಗಿ ಕನಸಲ್ಲೇ ಜೊತೆಯಾಗಿ ಕನಸಲ್ಲೇ ಹಿತವಾಗಿಕನಸಲ್ಲೇ ಮರೆಯಾಗಿ ಕನಸನ್ನೇ ಮರೆಮಾಡಿದೆಕನಸಿನ ಲೋಕದಿಂದ ವಾಸ್ತವತೆಗೆ ಎಳೆತಂದೆವಾಸ್ತವದಲ್ಲಿ ಮತ್ತೆ ಆ ಕನಸಿಗೆಕನಸಿನೊಳಗಿನ ನಿನ್ನ ಸಾಮಿಪ್ಯಕ್ಕೆಹಾತೊರೆದು ಕಾಯುವಂತೆ ಮಾಡಿದೆ ಕಾದು ಕಾದು ಬೇಸತ್ತು ಕಾಯುವುದು ನಿರರ್ಥಕವೆನಿಸಿಕಾಯುವ ಶಕ್ತಿಯನ್ನು ಕಳೆದುಕೊಳ್ಳಲು, ಆಗ ಎದುರಾದೆ!ಜೀವನದಲ್ಲಿ ಮತ್ತೊಮ್ಮೆ ಆಸೆಯ ಅಲೆಯೆಬ್ಬಿಸಿದುಃಖದ ಕಡಲಾಚೆಗೆ ಸೇರುವ ಚೈತನ್ಯವ ನೀಡಿಸಂತಸದ ಆಶಾಕಿರಣವ ಹೊತ್ತಿಸಿದೆಮತ್ತೆ ಮರೆಯಾಗದಿರು ಕನಸಿನ ಹಾಗೆ ಶಾಶ್ವತವಾಗಿರಿಸು ನಿನ್ನ ನೆನಪಿನ ಸವಿಯನ್ನು..

Instagram
LinkedIn
Share
RSS