ಹಚ್ಚುವ ಪ್ರತಿ ದೀಪವು ಬೆಳಗಲಿ ಬದುಕನ್ನು ಬೆಳಕಿನ ಪ್ರತಿ ಕಣವು ಹೊಡೆದೋಡಿಸಲಿ ಅಂಧಕಾರವನ್ನು ಜ್ಯೋತಿಯ ಪ್ರಖರತೆ ಮೂಡಿಸಲಿ ಒಳಿತಿನ ನಂಬುಗೆಯನ್ನು ಕುಡಿಯ ನಿಶ್ಚಲತೆ ತುಂಬಲಿ ದೃಡ ಆತ್ಮವಿಶ್ವಾಸವನ್ನು ಆರತಿಯ ಸಂಭ್ರಮವು ಹರಡಲಿ ಪ್ರೀತಿ ವಿಶ್ವಾಸವನ್ನು ನಂದಾದೀಪವು ಶಾಶ್ವತಗೊಳಿಸಲಿ ಬದುಕಿನ ಭವ್ಯತೆಯನ್ನು
ಹಚ್ಚುವ ಪ್ರತಿ ದೀಪವು ಬೆಳಗಲಿ ಬದುಕನ್ನು ಬೆಳಕಿನ ಪ್ರತಿ ಕಣವು ಹೊಡೆದೋಡಿಸಲಿ ಅಂಧಕಾರವನ್ನು ಜ್ಯೋತಿಯ ಪ್ರಖರತೆ ಮೂಡಿಸಲಿ ಒಳಿತಿನ ನಂಬುಗೆಯನ್ನು ಕುಡಿಯ ನಿಶ್ಚಲತೆ ತುಂಬಲಿ ದೃಡ ಆತ್ಮವಿಶ್ವಾಸವನ್ನು ಆರತಿಯ ಸಂಭ್ರಮವು ಹರಡಲಿ ಪ್ರೀತಿ ವಿಶ್ವಾಸವನ್ನು ನಂದಾದೀಪವು ಶಾಶ್ವತಗೊಳಿಸಲಿ ಬದುಕಿನ ಭವ್ಯತೆಯನ್ನು
ಈ ಸಣ್ಣ ಘಳಿಗೇಲಿ ನಾ ಕಂಡ ಕನಸಲ್ಲಿ ಅರಳಿದ್ದು ನಿನ್ನಾನಗೆಯೇ ಈ ಸಿಹಿ ಗುಟ್ಟನ್ನು ನನ್ನ ಪಿಸುಮಾತು ನಿನಗೆಂದೇ ತಂದಿದೆ ಹಿಂದೆಲ್ಲ ಸಂಜೆ ನೀ ಬರುವ ಮುಂಚೆ ಕಾದಿದ್ದು ನಿನಗಾಗಿಯೇ ನಿನ್ನ ಮೈ ಸೋಕಿ ಬರುವ ತಂಗಾಳಿ ಹೇಳಿದ್ದು ಈ ಮಾತನೆ ತಪ್ಪು ಮಾಡಿದ್ದು ಈ ನನ್ನ ಕಣ್ಣು ಎದುರಿದ್ದ ನಿನ್ನ ನೋಡದೆ ಮತ್ತೊಂದು ತಪ್ಪು ಮಾಡಿದೆ ಆ ಕಣ್ಣು ಎಲ್ಲೆಲ್ಲು ನಿನ್ನ ಹುಡುಕಿದೆ ನೀ ಬರುವ ಮುಂಚೆ ಈ ತಂಪು ತಂಗಾಳಿ ಯಾಕಿಷ್ಟು ಬೀಸಿದೆ ಎಷ್ಟೊಂದು ಒಲವು ಹುಚ್ಚು ಈ ಹೃದಯ ನಿಂತು…
ಕವನದ ಹಂಗೇಕೆ ನನಗೆ ಬರೆವ ಪ್ರತಿ ಪದವು ನಿನ್ನ ಸೇರುತಿರಲು.. ಹಾಳೆ ತುಂಬವ ಗೋಜೇಕೆ ಎನಗೆ ಎರಡಕ್ಷರದಲ್ಲೇ ಭಾವವೆಲ್ಲ ಬಸಿದಿರಲು.. ಹಾಡು ಹಾಡುವ ತವಕವೇಕೆ ಈಗ ನಿನ್ನುಸಿರೆ ನನ್ನೆದೆಯಲ್ಲಿ ರಾಗವಾಗಿರಲು.. ವಿರಹದ ನೋವೇಕೆ ನೆನಪಿಗೆ ಮನದಲ್ಲಿ ಅನುರಾಗವೇ ತುಂಬಿರಲು..
ನಿನ್ನ ನೋಡುವ ಕಾತರತೆಯೊಂದಿಗೆ ಹೊರಟಿರುವೆ ನಾನು.. ಬೇಗ ಮುಗಿಸಿಕೊ ನಿನ್ನ ನಿತ್ಯದ ಜಂಜಡಗಳನ್ನು ಮೋಡದೊಡಲೊಳಗಿನ ಹನಿಗಳನೆಲ್ಲ ಹಿಂದಿಕ್ಕಿ ಬರುತಿದೆ ಬಿಂದುವೊಂದು ಭೂಮಿ ಕೂಡ ಸಜ್ಜಾಗಿದೆ ಸಿಂಧುವಾಗಲೆಂದು..
ಸುಳಿವೇ ಇಲ್ಲದೆ ಕಾಡುವ ಮರೆತ ರಾಗದಂತೆ.. ಮೋಡವೇ ಇಲ್ಲದೆ ಸುರಿವ ಮಳೆಯ ಹನಿಯಂತೆ.. ದಾಟಿದಷ್ಟು ಬೆಳೆವ ಕಡಲ ಹರವಿನಂತೆ… ಮರೆಮಾಡಿದಷ್ಟು ಇಣುಕುವ ಮೊದಲ ಪ್ರೇಮಿಯ ಕುಡಿನೋಟದಂತೆ.. ಭಾವದ ಭಾರ.
ದಕ್ಕದೇ ಕಳೆದು ಹೋದ ಇವಿಷ್ಟು ದಿನಗಳಲ್ಲಿ ಬದುಕೆಂಬ ಬಂಡಿ ಅಲೆದದ್ದು ಎಲ್ಲೆಲ್ಲಿನಡೆದದ್ದಾಯ್ತು ಅದರ ಸಾಹೇಬನ ಅಂಕೆಯಲ್ಲಿ ಸೋತ ನಂತರ ಮೀರಬೇಕೆಂಬ ಪ್ರಯತ್ನದಲ್ಲಿ ಮೂಡುತ್ತಿತ್ತು ಹಲವು ಕನಸು ಮನದಲ್ಲಿವಾಸ್ತವ ಪ್ರಶ್ನೆಯಾಗಿ ಕೂಡುತ್ತಿತ್ತು ಕಣ್ಣಲ್ಲಿ ನನಸಲೇ ಬೇಕೆಂಬ ಹಠ ಸರಿಯಿತಲ್ಲಿ ಉತ್ತರ ಹುಡುಕಲೇ ಬೇಕಾದ ಅನಿವಾರ್ಯದಲ್ಲಿ ಇಂತಹ ಆತ್ಮ ಹತ್ಯೆಗಳಿಗೆ ಕೊನೆಯಲ್ಲಿ ?