ಹಳೆ ನೆನಪುಗಳನ್ನೆಲ್ಲ ಅಳಿಸಿ ಹೊಸ ಮನ್ವಂತರಕ್ಕೆ ಕಾಲಿಡಬೇಕು. ಅಲ್ಲಿ ಬರಿ ಕನಸು, ಭರವಸೆ .. ನೋವಾಗಿ ಕಾಡುವ ನೆನಪನ್ನೆಲ್ಲ ಮತ್ತೆ ಬರಲಾರದಷ್ಟು ದೂರ ಬಿಸುಟು ಬರಿದಾಗಬೇಕು … ಅದರ ಹಂಗು ಮಾತ್ರವಲ್ಲ ಕಿಂಚಿತ್ತು ಪ್ರಭಾವವನ್ನು ಇಲ್ಲವಾಗಿಸಿಕೊಳ್ಳಬೇಕು ಅನ್ನುವ ತಪನೆ .. ಎಲ್ಲ ಬಿಟ್ಟು ನಾನು ಬರಿ ನಾನಾಗಿ ನಿನ್ನ ಮಡಿಲಿಗೆ ಬಂದು ಬೀಳುತ್ತಲಿದ್ದೇನೆ.. ಹರಸಿ ಮಡಿಲು ತುಂಬಿಕೊ, ಎತ್ತಿ ಎದೆಗೆ ಅಪ್ಪಿಕೋ .. ಮತ್ತೆ ಆ ನೋವಿನ ಹಳೆ ಹಂದರಕ್ಕೆ ಬೀಳದ ಹಾಗೆ ಗಟ್ಟಿಮಾಡಿಕೋ ಹೊಸ ಹಾಡೊಂದನ್ನ ಹಾಡೋಣ ಹೊಸ ಬಾಳೊಂದನ್ನ ಕಟ್ಟೋಣ ಅದರ…