ಒಲವಿನ ಹಾಡು

ಭಟ್ಟರ ಇನ್ನೊಂದು ಅದ್ಭುತ ಸಾಹಿತ್ಯ..

ನನ್ನ ಬ್ಲಾಗ್ನಲ್ಲಿ  ಇದು ಮೊದಲು.. ನನಗೆ ಮೆಚ್ಚಿದ್ದು, ಆತ್ಮೀಯವೆನಿಸಿದ್ದನ್ನು ಹಂಚಿಕೊಳ್ಳುವ ಹೊಸ ಹುಚ್ಚಿನ ಒಂದು ಮಜಲು.. ಇದು ಮುಂದುವರಿಯಲಿದೆ.. ನಿರಂತರವಾಗಿ.. ಒಪ್ಪಿಸಿಕೊಳ್ಳಿ..
ಚಿತ್ರ :                  ಜಾಕಿ
ಸಾಹಿತ್ಯ :              ಯೋಗರಾಜ್ ಭಟ್
ಸಂಗೀತ :             ಹರಿಕೃಷ್ಣ
ಗಾಯಕರು:        ಸೋನು ನಿಗಮ್, ಶ್ರೇಯ ಘೋಶಾಲ್
ನಿರ್ದೇಶನ :         ಸೂರಿ

ಎರಡು ಜಡೆಯನ್ನು  ಎಳೆದು ಕೇಳುವೆನು ನೀ ಸ್ವಲ್ಪ ನಿಲ್ಲಬಾರದೆ
ಎರಡು ನೆರಳೇಕೆ ನಾವಿಬ್ಬರು ಒಂದೇ ಬಳಿ ನೀನು ಬರಬಾರದೇ
ನೀ ದೂರ ನಿಂತಾಗ ಬಾ ಎಂದು ನಾ ನಿನ್ನ ಕೂಗೋದು ಚಟವಲ್ಲವೇ
ಇಷ್ಟೊಂದು ಒಲವಲ್ಲಿ ನಿನ್ನ ನೀಳ ತೋಳನ್ನು ಬಯಸೋದೆ ಹಿತವಲ್ಲವೆ

ಎರಡು ಕಂಗಳಿಗೆ ಮುತ್ತು ನೀಡುವೆನು ನೀ ಇಲ್ಲಿ ಬರಬಾರದೇ
ಎಲ್ಲ ಕನಸನ್ನು ಒಂದೇ ನೆರಳಲ್ಲಿ ಸಾಲಾಗಿ ಇಡಬಾರದೆ

ಬಾಯಾರಿ ನಾ ನಿಂತ ಘಳಿಗೇಲಿ ಮಳೆಯೊಂದು ತಾನಾಗೆ ಬರಬಾರದೇ
ಹಾಯಾದ ಸಂಜೆಯಲಿ ಹುಸಿ ಮುನಿಸು ಬಂದಾಗ ನೀನೊಮ್ಮೆ ಸಿಗಬಾರದೇ

ನೀನಿಲ್ಲದಾಗ ನಾ ಕಂಡ ಕನಸು ಅತಿಯಾಗಿ ನೆನಪಾಗಿದೆ
ಬಿಡದೆ ಕಂಗಳಿಗೆ ಮುತ್ತು ನೀಡುವೆನು ನೀ ಇಲ್ಲಿ ಬರಬಾರದೇ
ಎಲ್ಲ ಕನಸನ್ನು ಒಂದೇ ನೆರಳಲ್ಲಿ ಸಾಲಾಗಿ ಇಡಬಾರದೆ

ನಾ ತುಂಬಾ ನಗುವಾಗ ಈ ಕೆನ್ನೆ ಮೇಲೊಂದು ಚುಕ್ಕಿಯ ಇಡಬಾರದೆ
ಖುಷಿಯಲ್ಲಿ ನಿನ್ನನ್ನು ಮಗುವಂತೆ ಬಿಗಿದಪ್ಪಿ ನಾ ಬಿಕ್ಕಿ ಅಳಬಾರದೆ
ನಿನ್ನಿಂದ ಕನಸು ನಿನ್ನಿಂದಲೇ ಮುನಿಸು ಕಲಿಯೋದು ಮಜವಾಗಿದೆ ..

Let me know what you think..

1 Comment

  • Sandesh September 15, 2010 at 02:26

    Nice lyrics …. heard it for the first time !

    Thanks Suhas !

    Reply

Leave a Reply

Facebook
Facebook
Instagram
LinkedIn
RSS