ದಕ್ಕದೇ ಕಳೆದು ಹೋದ ಇವಿಷ್ಟು ದಿನಗಳಲ್ಲಿ
ಬದುಕೆಂಬ ಬಂಡಿ ಅಲೆದದ್ದು ಎಲ್ಲೆಲ್ಲಿ
ನಡೆದದ್ದಾಯ್ತು ಅದರ ಸಾಹೇಬನ ಅಂಕೆಯಲ್ಲಿ
ಸೋತ ನಂತರ ಮೀರಬೇಕೆಂಬ ಪ್ರಯತ್ನದಲ್ಲಿ
ಮೂಡುತ್ತಿತ್ತು ಹಲವು ಕನಸು ಮನದಲ್ಲಿ
ವಾಸ್ತವ ಪ್ರಶ್ನೆಯಾಗಿ ಕೂಡುತ್ತಿತ್ತು ಕಣ್ಣಲ್ಲಿ
ನನಸಲೇ ಬೇಕೆಂಬ ಹಠ ಸರಿಯಿತಲ್ಲಿ
ಉತ್ತರ ಹುಡುಕಲೇ ಬೇಕಾದ ಅನಿವಾರ್ಯದಲ್ಲಿ
ಇಂತಹ ಆತ್ಮ ಹತ್ಯೆಗಳಿಗೆ ಕೊನೆಯಲ್ಲಿ ?
>ದಯವಿಟ್ಟು ಪದ್ಯದ ಸಾರ೦ಶ ಬರೆಯಿರಿ
>perfect aagide…. good job keep it up
>@Raki: 5marks question.. give it a shot!!
@shammi: That meant a lot.. Thanku!!
>ಚೆನ್ನಾಗಿದೆ ಸುಹಾಸ್. ಆತ್ಮಹತ್ಯೆಗೆ ಕೊನೆ ಆತ್ಮಹತ್ಯೆ ಮಾಡಿಕೊಳ್ಳದೇ ಇರುವುದು. 🙂
>Hey sakkatagide kano.. 🙂
>ಬದುಕಿನ ಆಸರೆ ಬರಿ ಕನಸಾಗಿ ಹೊಗುವಾಗ ಆತ್ಮಹತ್ಯೆಯೆ ಕೊನೆಯ ಪುಠವೆ೦ದು ಅನಿಸುವ ಈ ಮನಸನ್ನು ಧಿಟ್ಟತನದಿ೦ದ ಎದುರಿಸು.
ನನ್ನ ಈ ಅನಿಸಿಕೆ ಸಾರ೦ಶವು ನಿಜ ಹಾಗು ಇದು ಜೀವನದ ಪಾಠವು ಕೂಡ.
>ಚೆನ್ನಾಗಿ ಕಲ್ತಿದ್ಯ. ಪಾಠ ಸರಿ ಇದೆ.. ಸಾರಾಂಶ ೨.೫ ಅಂಕ ಗಳಿಸಿದೆ!! ರಾಕಿ ಇದರ ಹಿಂದೆ ಇನ್ನು ಸಾಕಷ್ಟು ಅರ್ಥ ಭಾವ ಇದೆ ಕಣೋ.. ಅದು ನಿನ್ನಲ್ಲಿ ಪ್ರಕಟವಾದ ದಿನ ಸಂಪೂರ್ಣ ಅರ್ಥ ಗೋಚರವಾಗುತ್ತೆ, ಥ್ಯಾಂಕ್ಸ್.