ಎಲ್ಲಿರುವೆ ಎನ್ನ ಮನದನ್ನೆ
ಸಾಕಿನ್ನು ಹುಡುಗಾಟ
ಬಂದುಬಿಡು ಕಣ್ಮುಂದೆ.
ಸಾಕಿನ್ನು ಹುಡುಗಾಟ
ಬಂದುಬಿಡು ಕಣ್ಮುಂದೆ.
ಕನಸು ಕಣ್ಣಿಣಲ್ಲಿ ಉಳಿಯಲಾರದೆ
ನಿದ್ದೆಯನ್ನು ಸರಿ ದೂರ ಓಡಿಸಿದೆ
ಬೆಳದಿಂಗಳು ನೋಡಿ ನಗುತಿದೆ
ಕವಿತೆಯು ತಾನೆ ಜ್ವರವಾಗಿದೆ
ಕವಿ ಮನಸು ಜಡವಾಗಿದೆ
ನೀನಿಲ್ಲದೆ ಭಾವಗೀತೆಯು ಭಾರವಾಗಿದೆ
ನನ್ನ ಮನವು ನನ್ನೆ ಕೆಣಕುತಿದೆ
ಕವನ ಮುನಿಸಿಕೊಂಡಿದೆ
ವಿರಹದ ತಾಪವೇರುತಿದೆ
ಇನ್ನು ಸಹಿಸಲಾರೆ ದೂರ
ಬಂದೆನ್ನ ಬಂಧಿಸು
ನಿನ್ನ ಬಿಸಿಯಪ್ಪುಗೆಯಲ್ಲಿ
ಮೋಡಮುಸುಕಿದ ಮನದಲ್ಲಿ
ಭಾವ ಸುರಿವಮಳೆಯಾಗಲಿ
ಕವನ ಮೊಳೆತು ಒಲವು ಅರಳಲಿ
>ಕವಿತೆಯು ತಾನೆ ಜ್ವರವಾಗಿದೆ
ಕವಿ ಮನಸು ಜಡವಾಗಿದೆ
ನೀನಿಲ್ಲದೆ ಭಾವಗೀತೆಯು ಭಾರವಾಗಿದೆ
Beautiful!
has a slight influence of
aavarisu song 🙂
>Nice …:)
>chennagide kano.. 🙂
>@ಶಮಾ: ಹಿಂದಿರುವ ತುಡಿತ ಏಕವಾದಾಗ, ಕೆಲವೊಮ್ಮೆ ಪ್ರಯೋಗ ಲೀನವಾಗಿಬಿಡುತ್ತದೆ.. ಥ್ಯಾಂಕ್ಯು.. 🙂
@ಸ್ವಾತಿ, @ದಿವ್ಯ: ಥ್ಯಾಂಕ್ಯು ಟೂ..